ಮೋದಿ, ಅಮಿತ್ ಶಾ, ಹೆಗಡೆ ಹಿಂದೂ ಅಲ್ಲ: ನಟ ಪ್ರಕಾಶ್ ರೈ | Oneindia Kannada

2018-01-19 753

ನಾನು ಹಿಂದೂ ವಿರೋಧಿ ಅಂತ. ಇಲ್ಲ. ನಾನು ಮೋದಿ ವಿರೋಧಿ, ನಾನು ಹೆಗಡೆ ವಿರೋಧಿ, ನಾನು ಅಮಿತ್ ಶಾ ವಿರೋಧಿ. ಮತ್ತು ನನ್ನ ಪ್ರಕಾರ ಅವರು ಹಿಂದೂಗಳಲ್ಲ". -ಈ ಹೇಳಿಕೆ ಮೂಲಕ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದ್ದಾರೆ ನಟ ಪ್ರಕಾಶ್ ರೈ. ಬೆಂಗಳೂರಿನಲ್ಲಿ ಗುರುವಾರ ಇಂಡಿಯಾ ಟುಡೆ ದಕ್ಷಿಣ ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ಸೆಕ್ಸಿ ದುರ್ಗಾ' ಎಂಬ ಹೆಸರಿನಲ್ಲಿ ಸಿನಿಮಾ ಮಾಡಿರುವ ನಿರ್ದೇಶಕ ಶಶಿಧರನ್ ಅವರನ್ನು ಬೆಂಬಲಿಸಿ ಮಾತನಾಡಿದರು.

"ಈ ಸಿನಿಮಾ ಹಿಂದೂ ಧರ್ಮದ ಬಗ್ಗೆ ಅಲ್ಲ. ಹಿಂದುತ್ವದ ವಿರೋಧವಾಗಿಲ್ಲ. ಆದರೂ ಈ ಸಿನಿಮಾ ಹಿಂದೂ ಧರ್ಮದಕ್ಕೆ ಸಂಬಂಧಿಸಿದ್ದು ಎನ್ನುತ್ತಿದ್ದಾರೆ" ಎಂದು ಪ್ರಕಾಶ್ ರೈ ಹೇಳಿದರು.

ಇನ್ನು ಹಿಂದುತ್ವ ವಿರೋಧಿ ಹೇಳಿಕೆ ನೀಡಿದ ಕಾರಣಕ್ಕೆ ಕರ್ನಾಟಕ ಸರಕಾರ ಸೈಟ್ ನೀಡಿದೆಯಂತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ನನ್ನ ಹತ್ತಿರ ಸಾಕಷ್ಟು ಹಣ- ಭೂಮಿ ಇದೆ. ನನಗೆ ಸರಕಾರದಿಂದ ಯಾವುದೇ ಭೂಮಿ ಬೇಡ ಎಂದಿದ್ದಾರೆ.
Actor Prakash Rai is once again in the lime light for his anti BJP statement. This time he has said that Modi , shah and Hegde are not Hindus for me

Videos similaires